Friday 12 March, 2010

ಆಲೆಮನೆಗೆ ಹೋಗೋಣ ಬನ್ನಿ...

ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ

ಬಳಿಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು...



ಕನ್ನಡದ ಎವರ್‍ಗ್ರೀನ್ ಹಾಡುಗಳಲ್ಲಿ ಒಂದಾದ ಇದು ಸುರೇಶ್ ಹೆಬ್ಳೀಕರ್ ನಟಿಸಿ ನಿರ್ದೇಶಿಸಿದ ಸೂಪರ್ ಹಿಟ್ ಸಸ್ಪೆನ್ಸ್ ಚಿತ್ರ 'ಆಲೆಮನೆ'ಯದ್ದು. 

ಅದು ಸರಿ, ಆಲೆಮನೆ ಎಂದರೆ ಏನು? ಕಬ್ಬಿನಾಲೆ ಅಥವಾ ಆಲೆಮನೆ ಎಂದರೆ ಕಬ್ಬಿನಿಂದ ಬೆಲ್ಲ ತಯಾರಿಸುವ ಜಾಗ. ಮಲೆನಾಡು ಪ್ರದೇಶಗಳಾದ ಶಿರಸಿ, ಸಾಗರ, ಶಿವಮೊಗ್ಗ ಸುತ್ತಮುತ್ತಲ ಊರುಗಳು, ಮೈಸೂರು, ಮಂಡ್ಯ ಕಡೆ ಇವು ಹೆಚ್ಚಾಗಿ ಕಂಡುಬರುತ್ತವೆ. ಅಂಥ ಒಂದು ಆಲೆಮನೆಯ ಕೆಲ ದೃಶ್ಯಗಳು. 

ಇದು ಸೊರಬ ತಾಲೂಕಿನ ಕ್ಯಾಸನೂರಿನ ಬಳಿಯ ಕಬ್ಬಿನಾಲೆ.


ಬೆಲ್ಲದ ಕಬ್ಬಿನ ರಾಶಿ


ಸಂಕ್ರಾಂತಿ ನಂತರ ಕಬ್ಬು ಬೆಳೆಗಾರರು ಸೇರಿ ಕಬ್ಬರೆಯುವ ಯಂತ್ರವನ್ನು ತರಿಸುತ್ತಾರೆ. ಸರತಿಯಂತೆ ತಮ್ಮ ಬೆಳೆಯನ್ನು ತಂದು ಅರೆಯಿಸಿ ಬೆಲ್ಲ ಮಾಡಿಕೊಂಡು ಹೋಗುತ್ತಾರೆ. ಇದು ಸುಮಾರು ಜನವರಿಯಿಂದ ಮಾರ್ಚ್ ವರೆಗೆ ಇದ್ದು, ಆಮೇಲೆ ಬೇರೆ ಪ್ರದೇಶಕ್ಕೆ ಹೊರಡುತ್ತಾರೆ ಕಬ್ಬರೆಯುವವರು.

ಮೊದಲು ಎತ್ತಿನಿಂದ ಕಬ್ಬಿನ ಗಾಣ ತಿರುಗಿಸುತ್ತಿದ್ದರು, ಈಗ ಡೀಸಲ್ ಯಂತ್ರ ಬಂದಿದೆ.

ಅರೆದ ಕಬ್ಬಿನಿಂದ ಹೊರಬರುತ್ತಿರುವ ರಸ (ಕಬ್ಬಿನ ಹಾಲು). ಗಾಣಯಂತ್ರದಿಂದ ಹಾಲು ಹೊರಬಂದು ಪಾತ್ರೆಗೆ ಬೀಳುವಂತೆ ಕೊಳವೆ ಜೋಡಿಸಿರುತ್ತಾರೆ


ಕಬ್ಬಿನರಸವನ್ನು ಸುಮಾರು ಮೂರ್ನಾಲ್ಕು ಗಂಟೆ ಕೊಪ್ಪರಿಗೆಗಳಲ್ಲಿ ಕುದಿಸಲಾಗುತ್ತದೆ


ಕುದಿಸಿದ ಹಾಲಿನಿಂದ ತಯಾರಾದ ಬೆಲ್ಲ. ಮಲೆನಾಡು ಕಡೆ ಹೆಚ್ಚಾಗಿ ಯಾವಾಗಲೂ ದ್ರವರೂಪದಲ್ಲೆ ಇರುವ ಜೋನಿ ಬೆಲ್ಲ ತಯಾರಿಸಲಾಗುತ್ತದೆ. ಮೈಸೂರು, ಮಂಡ್ಯ ಕಡೆ ಗಟ್ಟಿ ಉಂಡೆ ಬೆಲ್ಲ ಅಥವಾ ಬಕೆಟ್ ಬೆಲ್ಲ ತಯಾರಿಸುತ್ತಾರೆ.

ಆಲೆಮನೆಯಲ್ಲಿ ಸಿಗುವ ನೊರೆ ನೊರೆ ಹಾಲಿನ ರುಚಿಯನ್ನು ಸವಿದವರೇ ಗೊತ್ತು ಎಷ್ಟು ರುಚಿ ಎಂದು. ಅಲ್ಲಿನ ಕಬ್ಬನ್ನು ತಿನ್ನುವ ಮಜವೇ ಬೇರೆ.

25 comments:

shivu.k said...

ಸರ್,

ಆಲೇಮನೆಯ ಸಚಿತ್ರ ಲೇಖನ ತುಂಬಾ ಚೆನ್ನಾಗಿದೆ...

ಮನಮುಕ್ತಾ said...

ಚಿಕ್ಕ೦ದಿನಲ್ಲಿ ಆಲೆಮನೆಗೆ ಹೋಗಿ ನೊರೆಹಾಲು ಕುಡಿದು ಕಬ್ಬು ತಿನ್ನುತ್ತಾ ಮನೆಗೆ ಹೋಗುತ್ತಿದ್ದೆವು.ನಾಲ್ಕಾರು ಕಬ್ಬಿಗಳನ್ನು ಹೆಚ್ಚಿಗೆಯೆ ಕೊಡುತ್ತಿದ್ದರು.ಆಸುಪಾಸು ಎಲ್ಲಿಯೆ ಆಲೆಮನೆ ಇದ್ದರೂ ಕರೆಯುತ್ತಿದ್ದರು.ಎಲ್ಲ ನೆನಪಿಸಿದ್ದಕ್ಕೆ ಧನ್ಯವಾದಗಳು.
ಲೇಖನ ಚೆನ್ನಾಗಿದೆ.

ಮನಸಿನಮನೆಯವನು said...

'Deepasmitha' ಅವ್ರೆ..,

ನಮ್ ಮಂಡ್ಯ ಕಡೆ ಈ ರೀತಿ ಆಲೆಮನೆ ನೋಡಿಲ್ಲ...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Subrahmanya said...

ಕಬ್ಬು ಹಾಕಿದಾಗ ನಮ್ಮ ಗದ್ದೆಯಲ್ಲೇ ಆಲೆಮನೆ ಕಟ್ಟುತ್ತಿದ್ದರು. ಈಗೆಲ್ಲಾ ಕ್ರಷರ್ ಗಳದ್ದೇ ಕಾರುಬಾರು. ಅಂಟು, ಗೂಳ, ಬೆಲ್ಲ, ಮತ್ತೆ ಅಲ್ಲೇ ಹೋಗಿ ಮಿಠಾಯಿ ಮಾಡಿ ತಿನ್ನುತ್ತಿದ್ದೆವು. ನಿಮ್ಮ ಸಚಿತ್ರ ಬರಹ ನನ್ನ ಎಲ್ಲಾ ನೆನಪನ್ನೂ ಕೆದಕಿತು. ಇಂದಿಗೂ ಹಾಸನ ಜಿಲ್ಲೆಯಲ್ಲಿ ಆಲೆಮನೆ ಪದ್ದತಿಯಿದೆ. ಚೆನ್ನಾಗಿದೆ ಚಿತ್ರಗಳು

ಜಲನಯನ said...

ದೀಪಸ್ಮಿತಾ , ಕಬ್ಬಿನ ಆಲೆಮನೆಯ ನೆನಪುಗಳು ಹಸಿರಾದವು ನಿಮ್ಮಬ್ಲಾಗ್ ನೋಡಿ...೧೯೮೪-೮೬ ರಲ್ಲಿ ಮಂಡ್ಯದಲ್ಲಿ ಇವುಗಳ ಮಧ್ಯೆಯೇ ಓಡಾಟ...

ಗೌತಮ್ ಹೆಗಡೆ said...

ಥ್ಯಾಂಕ್ಸ್ ಫಾರ್ ದಿಸ್.ನಮ್ಮೂರ ಆಲೆಮನೆಗೆ ಹೋಗಲಿಕ್ಕೆ ಆಗಲೇ ಇಲ್ಲ ಈ ಬಾರಿ :)

Raghu said...

ಒಳ್ಳೆಯ information ...
ನಿಮ್ಮವ,
ರಾಘು.

Snow White said...

chitragalu mattu mahiti chennagide sir.. :)

Suma

ವಿ.ರಾ.ಹೆ. said...

ಆಲೆಮನೆ ಚಿತ್ರಮಾಹಿತಿ ಚೆನ್ನಾಗಿದೆ. thanks

ಬಾಲು said...

ಒಳ್ಳೆ ಮಾಹಿತಿ, ಹಿಡಿಸಿತು.

ಚುಕ್ಕಿಚಿತ್ತಾರ said...

ಆಲೆಮನೆ ಚಿತ್ರಗಳು ಚನ್ನಾಗಿವೆ..
ಮೊದಲೆಲ್ಲಾ ಕಬ್ಬನ್ನು ಅರೆಯಲು ಮಶಿನಿಗೆ ಕೋಣ ಕಟ್ಟುತ್ತಿದ್ದರು..
ಕೂಗುತ್ತಾ ಕೋಣ ಹೊಡೆಯುವುದನ್ನು ನೋಡಲು ಒ೦ತರಾ ಖುಶಿ...
ಈಗೀಗ ವಿದ್ಯುಚ್ಚಾಲಿತ ಯ೦ತ್ರಗಳನ್ನು ಬಳಸುತ್ತಾರೆ..

ಸವಿಗನಸು said...

ಕಬ್ಬಿನ ಆಲೆಮನೆಯ ನೆನಪುಗಳು ಮರುಕಳಿಸಿದವು.....
ಚೆನ್ನಾಗಿದೆ ಚಿತ್ರಗಳು ಹಾಗೂ ಬರಹ...

VENU VINOD said...

ಒಳ್ಳೆಯ ಚಿತ್ರಗಳು + ಸುಂದರ ವಿವರಣೆ

Ravi Hegde said...

ಆಲೆಮನೆ ಚೆನ್ನಾಗಿದೆ...

nenapina sanchy inda said...

hello
nanage norebella nenapaaytu. nammooru teerthahlliyalli naavu yaavaagalU bella koLLuva aalemane nintu hoytu.
bejaaru.
nice write up with the pic
thank you
malathi S

Unknown said...

Maahitipoorna lekhana..

ಸುಧೇಶ್ ಶೆಟ್ಟಿ said...

alemaneya bagege thumba chandhadha baraha baredhu vivarane needideeri... naanu ondu sala nodiddene alemaneyannu :)

ದೀಪಸ್ಮಿತಾ said...

ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಅನೇಕ ಚಟುವಟಿಕೆಗಳು ನಡೆಯುತ್ತಿರುತ್ತವೆ, ಕೆಲವು ಮರೆಯಾಗುತ್ತಿವೆ. ಇವನ್ನು ನೆನಪಿಸಿಕೊಳ್ಳುವುದು, ಪರಿಚಯಿಸುವುದು ಆಗಬೇಕಿದೆ. ಸಾಧ್ಯವಾದಲ್ಲೆಲ್ಲ ಪ್ರಯತ್ನಿಸುತ್ತೇನೆ ಬ್ಲಾಗ್‍ನಲ್ಲಿ ಹಾಕಲು.

ನನಗೆ ಬಯಲು ಸೀಮೆ ಪ್ರದೇಶದ ಬಗ್ಗೆ ಹೆಚ್ಚು ತಿಳಿದಿಲ್ಲ. ನನಗೇನಿದ್ದರೂ ಮಲೆನಾಡು, ಕರಾವಳಿ ಕಡೆ ನಡೆಯುವ ವಿಶೇಷಗಳ ಬಗ್ಗೆ ಬರೆಯಲು ಸಾಧ್ಯ. ಆದ್ದರಿಂದ ನನ್ನ ಬ್ಲಾಗಿನಲ್ಲಿ ಹೆಚ್ಚಾಗಿ ಈ ಪ್ರದೇಶದ ಬಗ್ಗೆ ಜಾಸ್ತಿ ಇರುತ್ತದೆ.

ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಇನ್ನೊಮ್ಮೆ ನಮನಗಳು

ಸಾಗರದಾಚೆಯ ಇಂಚರ said...

ಆಲೆಮನೆಯ ಬಗ್ಗೆ ಒಳ್ಳೆಯ ಲೇಖನ
ನಿಮ್ಮ ಬ್ಲಾಗ್ ಅಪ್ಡೇಟ್ ಆಗುತ್ತಿಲ್ಲ ನನಗೆ
ದಯವಿಟ್ಟು ಹೊಸ ಲೇಖನ ಹಾಕಿದ ಕೂಡಲೇ ಒಂದು ಮೇಲ್ ಮಾಡುವಿರಾ?

V.R.BHAT said...

ಕೆಲವೇ ವರ್ಷಗಳಲ್ಲಿ ಹಳ್ಳಿಯ ಮೂಲೆಯಲ್ಲೂ ನೋಡಲು ಸಿಗದ್ದು ಈ ಆಲೆಮನೆ, ನಮ್ಮ ಬಾಲ್ಯದ ಆಲೆಮನೆ ವೈಭವವೇ ಬೇರೆ ಇತ್ತು ಬಿಡಿ, ಇಂದಿಗೆ ಅದು ಕೇವಲ ನೆನಪು, ಚೆನ್ನಾಗಿ ವಿವರಿಸಿದ್ದೀರಿ

Uday Hegde said...

Nice article,now a days its very rare to see "Aalemane" in Sirsi surrounding area. I feel in future we need to feel "Aalemane" only in pictures like wild animals.

Thanks for visiting my blog and for your comment..which means a lot to me.

ಸೀತಾರಾಮ. ಕೆ. / SITARAM.K said...

ಅಲೆಮನೆಯ ಮಾಹಿತಿ ಚೆ೦ದವಿದೆ. ನಮ್ಮ ತಾಯಿಯ ಊರು ಕಬ್ಬಿನಾಲೆ (ಹೆಬ್ರಿಯ) ಹತ್ತಿರ ಅಲ್ಲೆಲ್ಲೂ ಅಲೆಮನೆ ನೋಡಿಲ್ಲ. ಹಿ೦ದೆ ಇತ್ತ೦ತೆ. ತಮ್ಮಿ೦ದ ಅದು ಹೇಗಿತ್ತು ಅ೦ಥಾ ತಿಳಿಯಿತು.

ವಸಂತ್ ಗಿಳಿಯಾರ್ said...

alemane andre heegirotte antale gottiralilla.. nanna badukina anubhavada angadiyalli neevu kotta maahitiya saraku yendendigu idde irotte

BHUVAN said...

idu nimma rhudayada sihi

BHUVAN said...

idu nimma rhudayada sihi