ಇದರಲ್ಲಿ ಮುಖ್ಯವಾಗಿ ಎರಡು ರೀತಿಯ ಪಾತ್ರಧಾರಿಗಳು ಪಾತ್ರವಹಿಸುತ್ತಾರೆ, ಇವರಿಗೆ ವೈದ್ಯರೆನ್ನುತ್ತಾರೆ. ಸರ್ಪರಾಜನನ್ನು ಆವಾಹಿಸಿಕೊಳ್ಳುವವರಿಗೆ ಪಾತ್ರಿ ಎಂದು ಕರೆಯುತ್ತಾರೆ. ಪಾತ್ರಿಯು ಅಡಿಕೆಹೂವನ್ನು (ಇದಕ್ಕೆ ಸಿಂಗಾರದ ಹೂವು ಎಂದು ಕರೆಯುತ್ತಾರೆ) ಆಸ್ವಾದಿಕೊಂಡು ಸರ್ಪರಾಜನನ್ನು ಆವಾಹಿಸಿಕೊಳ್ಳುತ್ತಾನೆ. ಮತ್ತೊಬ್ಬನು ನಾಗಕನ್ನಿಕೆಯಾಗುತ್ತಾನೆ.
ಸರ್ಪರಾಜನಾದ ಪಾತ್ರಿ ಮತ್ತು ನಾಗಕನ್ನಿಕೆ ವಿಶೇಷವಾಗಿ ರಚಿಸಲ್ಪಟ ಮಂಟಪದಲ್ಲಿ ನಾಗಮಂಡಲ (ಐದು ಬಣ್ಣಗಳಲ್ಲಿ (ಪಂಚವರ್ಣಹುಡಿ) ಬಿಡಿಸಿದ ನಾಗಗಳ ರಂಗೋಲಿ) ದ ಸುತ್ತ ನರ್ತಿಸುತ್ತಾರೆ. ಚಂಡೆ, ಮದ್ದಳೆ, ಡಕ್ಕೆ, ನಾಗಸ್ವರ ಮುಂತಾದ ವಾದ್ಯಗಳ ಹಿಮ್ಮೇಳದಲ್ಲಿ ಸಂಗೀತ ಕೂಡ ಇರುತ್ತದೆ. ಈ ನಾಗಮಂಡಲದ ರಚನೆ ಕೂಡ ತುಂಬಾ ವಿಶಿಷ್ಟ ಹಾಗೂ ಕ್ಲಿಷ್ಟಕರ. ನೃತ್ಯದ ನಂತರ ಸರ್ಪರಾಜ ಮತ್ತು ಕನ್ನಿಕೆಯ ಮಿಲನವಾಗುತ್ತದೆ. ಒಂದು ಜೋಡಿ ಗಂಡು ಹೆಣ್ಣಿನ ಮಿಲನದ ನಂತರ ಇನ್ನೊಂದು ಜೋಡಿ ನಾಗಮಂಡಲದ ಸುತ್ತ ನರ್ತಿಸಲು ತೊಡಗುತ್ತದೆ. ಹೀಗೆ ಈ ಆಚರಣ ಇಡೀ ರಾತ್ರಿ ನಡೆಯುತ್ತದೆ.
ಕುಕ್ಕೆ ಸುಬ್ರಹ್ಮಣ್ಯ ನಾಗಮಂಡಲಕ್ಕೆ ತುಂಬಾ ಪ್ರಸಿದ್ಧಿ.
ಇತ್ತೀಚೆಗೆ ಇದು ನಡೆದಿದ್ದು ಬೆಂಗಳೂರು ಜಿಲ್ಲೆ ಆನೆಕಲ್ ತಾಲೂಕಿನ ಕೂಡ್ಲು ಗ್ರಾಮದಲ್ಲಿ. ಇಲ್ಲಿಯ ಮಾರುತಿ ದೇವಾಲಯದಲ್ಲಿ ಹನ್ನೆರಡು ದಿನಗಳವರೆಗೆ ಸಹಸ್ರ ಚಂಡಿಕಾಹೋಮ, ಅತಿರುದ್ರಮಹಾಯಾಗ ಹಾಗೂ ನಾಗಮಂಡಲ ವಿಜೃಂಭಣೆಯಿಂದ ನಡೆಯಿತು.
ನಾಗಮಂಡಲ ಆಚರಣೆಯ ಕೆಲ ದೃಶ್ಯಗಳು.
ಮಂಟಪ
ನಾಗರಾಜನ ಮೂರ್ತಿ
ಸಿಂಗಾರದ ಹೂವುಗಳನ್ನು ಹೊತ್ತ ಪಾತ್ರಿ
ಪಾತ್ರಿ ಹಾಗೂ ನಾಗನ್ನಿಕೆ
ನಾಗರಾಜ, ನಾಗಕನ್ನಿಕೆಯರ ನೃತ್ಯ
ನಾಗ ನಾಗಿಣಿಯರ ಮಿಲನ
ಎಡಗಡೆ ಇರುವುದು ಡಕ್ಕೆ. ಬಲಗಡೆ ಚಂಡೆ ವಾದ್ಯಗಾರರು
ಸರ್ಪರಾಜನಾದ ಪಾತ್ರಿಗೆ ಸಿಂಗಾರಹೂವಿನ ಅರ್ಚನೆ ಮತ್ತು ಅಭಿಷೇಕ
ಕಂಬಕ್ಕೆ ಅಡಿಕೆ ಮತ್ತು ಅಡಿಕೆ ಹೂವಿನ ಅಲಂಕಾರ. ಪಕ್ಕದಲ್ಲಿರುವುದು ಅಡಿಕೆ ಹೂವು (ಸಿಂಗಾರದ ಹೂವು)
ಉಡುಪಿ ಹಾಗೂ ದಕ್ಷಿಣಕನ್ನಡದಲ್ಲಿ ಹೆಚ್ಚಾಗಿ ನಡೆಯುವ ಈ ವಿಶಿಷ್ಟ ಸಂಪ್ರದಾಯ ನೋಡಲು ತುಂಬಾ ರೋಮಾಂಚನಕಾರಿ. ಇದು ಅಷ್ಟೇ ಅತಿ ದುಬಾರಿಯಾದ ಪೂಜಾಕ್ರಮ ಕೂಡಾ. ಒಂದು ನಾಗಮಂಡಲ ನಡೆಸುವುದಕ್ಕೆ ಸುಮಾರು ಇಪ್ಪತ್ತು ಲಕ್ಷವಾದರೂ ಆಗಬಹುದು.
16 comments:
ಚೆನ್ನಾಗಿದೆ. ಇದನ್ನು ಟಿ.ವಿ.ಯಲ್ಲೊಮ್ಮೆ ನೋಡಿದ್ದೆ. ವಿವರಗಳು ಲಭ್ಯವಾಗಿರಲಿಲ್ಲ...ಸಚಿತ್ರ ವಿವರಣೆಗೆ ಧನ್ಯವಾದಗಳು.
ಸರ್,
ಈ ಆಚರಣೆ ಬಗ್ಗೆ ಕೇಳಿದ್ದೆ ನೋಡಿರಲಿಲ್ಲ. ಅದನ್ನು ವಿವರವಾಗಿ ಮಾಹಿತಿಸಮೇತ ಚಿತ್ರಗಳೊಂದಿಗೆ ಕೊಟ್ಟಿದ್ದೀರಿ..ಅದಕ್ಕೆ ಧನ್ಯವಾದಗಳು.
I was specially invited to nagamandala pooja once and there i met an old priest who explained everything to me.
It takes such an elaborate preparation, and the decorations are eyecatching.
you have put up nice pic
thanks for visiting my blog
:-)
malathi S
ದೀಪಸ್ಮಿತ...
ಹಾವು ಎಂದರೆ ಮೊದಲಿನಿಂದಲೂ ಏನೋ ಆಕರ್ಷಣೆ..
ಹೆದರಿಕೆ...
ನಮ್ಮ ಸಂಪ್ರದಾಯದಲ್ಲಿ ಹೆಚ್ಚಿನ ಮೂಢ ನಂಬಿಕೆಗಳೇ ಹೆಚ್ಚು...
ನಾನು ಇದರ ಬಗೆಗೆ ಕೇಳಿದ್ದೆ...
ನಿಮ್ಮ ಸಚಿತ್ರ ವಿವರ ತುಂಬಾ ಮಾಹಿತಿಗಳನ್ನು ಕೊಟ್ಟಿತು...
ಇಪ್ಪತ್ತು ಲಕ್ಷ ಒಂದು ಪೂಜೆಗಾ ? !!
ಅಬ್ಭಾ ..!
ಚಂದದ ಫೋಟೊ.. ವಿವರಗಳಿಗೆ ಧನ್ಯವಾದಗಳು...
ಚೆ೦ದದ ಮಾಹಿತಿ. ಜೊತೆಗೆ ಸು೦ದರ ಚಿತ್ರಗಳು. ನಾನು ನಾಗ ದರ್ಶದ ಪಾತ್ರಿಗಳ ನೃತ್ಯ ನೋಡಿದ್ದೆ. ನಾಗಮ೦ಡಲ ನೋಡುವ ಸುಯೋಗ ದೊರೆತಿಲ್ಲ. ಧನ್ಯವಾದಗಳು. ದೀಪಸ್ಮಿತ್-ರವರೇ.
Udupiyavanaadha naanu naagamandalavannu halavaaru baari nodiddEne... aadhare adhara bagge gambeeravaagi aalOchisiralE illa :) naagamandala bidisuvudu thumba klishtakaravaadha kelasave... ashtu chennaagiruttade aa rangoliyalli bidisidha mandala... poojege ippaththu laksha aaguvudhu yemba kalpaneyE iralilla... thumba chennagidhe baraha :)
Deepasmitha,
ಚಿತ್ರಸಹಿತ ಕಣ್ಮುಂದೆ ತಂದಿದ್ದಕ್ಕೆ ಧನ್ಯವಾದಗಳು..
ದೀಪಸ್ಮಿತ ,
ನಾಗಮಂಡಲದ ಬಗ್ಗೆ ಚೆನ್ನಾಗಿ ಚಿತ್ರ ಸಮೇತ ವಿವರಿಸಿದ್ದೀರಿ.ನಾನು ನಮ್ಮ ಮನೆ ಅಂಗಳದಲ್ಲಿ ಆದಾಗ ನೋಡಿದ್ದೆ.ರಾತ್ರಿ ಇಡೀ ಕುಳಿತು ನೋಡಿರಲಿಲ್ಲ.ನಮ್ಮ ಕಡೆ ನಾಗಾರಾಧನೆ ಹೆಚ್ಚು (ಕರಾವಳಿ ಕಡೆ ) .ನನಗೂ ನಾಗ ಅಂದ್ರೆ ಒಂದು ರೀತಿಯ ಭಯ .ಪಾತ್ರಿ(ಬಾಯರಿ ) ,ಮತ್ತು ನಾಗ ಕನ್ನಿಕೆ (ವೈದ್ಯರು )ಅವರೆ ಹೆಚ್ಚಾಗಿ ಮಾಡೋದು .ನರ್ತನ ನೋಡುವುದೇ ಚಂದ ..ಚಂಡೆ ಬಾರಿಸುತ್ತ ಅವರ ನೃತ್ಯ ನೋಡುವಾಗ ಯಾವುದೊ ಲೋಕಕ್ಕೆ ಹೋದ ಅನುಭವ ಆಗುತ್ತೆ..ಅದರಲ್ಲಿ ಏಕ ಪವಿತ್ರ ,ಚತುರ್ಥ ,ಅಷ್ಟ ಪವಿತ್ರ ಅನ್ನುವ ನಾಗಮಂಡಲ 3 ಪ್ರಕಾರ ಉಂಟು ..ನನಗೆ ಹಿಂದೆ nodida ಮಂಡಲದ ನೆನಪು ಆಯಿತು .ಧನ್ಯವಾದಗಳು
ಸರ್,
ನಾಗಮಂಡಲದ ವಿವರಣೆ ಚೆನ್ನಾಗಿದೆ. ನಾನು ನಿಟ್ಟೆಯಲ್ಲಿ ಕಲಿಯುತ್ತಿರುವಾಗ ಒಮ್ಮೆ ನಾಗಮಂಡಲ ನೋಡಿದ್ದೆ.
ಆಮೇಲೆ ಬೆಂಗಳೂರಿಗೆ ಬಂದಮೇಲೆ ಇಲ್ಲಿ ಕೂಡ್ಲು[ ಇಲೆಕ್ಟಾನಿಕ್ಸ ಸಿಟಿ ಹತ್ತಿರ] ಎಂಬ ಗ್ರಾಮದಲ್ಲಿ ಮತ್ತೆ ನೋಡಿದೆ.
ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ಲೇಖನ. ಚೆನ್ನಾಗಿದೆ.
Good article... Photos are nice..
ದೀಪಸ್ಮಿತ ಅವರಿಗೆ ಸ್ವಾಗತ
ನಾಗಮಂಡಲದ ಬಗ್ಗೆ ಸಚಿತ್ರ ಚೆನ್ನಾಗಿ ಸೂಕ್ಷ್ಮವಾಗಿ
ತಿಳಿಸಿದ್ದೀರಾ.
ತುಳುನಾಡಿನ ವಿಶಿಷ್ಟ ಆಚರಣೆಯ ಹಿಂದೆ ಇರುವ
ಸರ್ಪಗಳ ಬಗೆಗಿನ ಭಯ, ಭಕ್ತಿ, ಪ್ರೀತಿ, ಆರಾದನೆ ಮತ್ತು ಸಂರಕ್ಷಣೆ ಮೆಚ್ಚುವಂತಹುದು.
ಡಂಬಾಚಾರವ ಮೀರಿ, ಕಲೆ ಮತ್ತು ಆಚರಣೆಯಾಗಿ
ನಾಗಮಂಡಲ ಕುತೂಹಲಕಾರಿ
ಧನ್ಯವಾದಗಳು
Nicely written with all details and picture ...good one..
ದೀಪಸ್ಮಿತಾ ನಾಗಮಂಡಲದ ಬಗ್ಗೆ ಕೇಳಿದ್ದೆ..ಆದ್ರೆ ಯಕ್ಷಗಾನ ಭೂತದ ಕೋಲ ಇವನ್ನೆಲ್ಲ ನೋಡಿದ್ದೆ..ನಾಗಮಂಡಲ ನೋಡಿರಲಿಲ್ಲ ಮಂಗಳೂರಿನಲ್ಲಿ ಎಂಟು ವರ್ಷ ವಿದ್ಯಾಭ್ಯಾಸ ಮಾಡಿದ್ರೂ...ಚನ್ನಾಗಿ ಮೂಡಿದೆ ಚಿತ್ರಲೇಖನ.
'ನಾಗಮಂಡಲ' ಹೆಸರು ಕೇಳಿ ಮಾತ್ರ ಗೊತ್ತಿದ್ದವರಿಗೆ ನಾಗಮಂಡಲ ಆಚರಣೆಯ ವಿವರದ ಜೊತೆಗೇ ಅಪರೂಪದ ಚಿತ್ರಗಳನ್ನೂ ನೀಡಿ ತಿಳುವಳಿಕೆಯನ್ನು ಹೆಚ್ಚಿಸಲು ಕಾರಣರಾಗಿದ್ದೀರಿ..ನಿಮಗೆ ಆಭಾರಿ.
ನಾಗಂಡಲದ ಬಗ್ಗೆ ಸಾಕಷ್ಟು ಕೇಳಿದ್ದೆ ನಿಮ್ಮ ಲೇಖನದಿಂದ ವಿವರಣೆಯೂ ಸಿಕ್ಕಿತು. ಕೀಪ್ ಇಟ್ ಅಪ್.
ಅಕ್ಷತ
yelli naaga mandala...
alli bhari bojana...
heege idanna odutta nanage yakshagaanada padyada nenapaitu.. melina 2 saalu "naaga mandala" yemba yakshagaanaddu... tumba maahithiyuktha baravanige..
naagamandala ondu rochaka anubhava...
Post a Comment