Friday, 1 July, 2011

ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ...

ಸೂರ್ಯ. ಕಣ್ಣಿಗೆ ಕಾಣುವ ದೇವರು. ಭಾರತೀಯ ಮತ್ತು ಜಗತ್ತಿನ ಅನೇಕ ಸಂಸೃತಿಯಲ್ಲಿ ತುಂಬಾ ಮಹತ್ವ ಪಡೆದ ಆಕಾಶಕಾಯ. ಸೂರ್ಯ, ರವಿ, ಭಾಸ್ಕರ, ದಿನಕರ, ದಿವಾಕರ, ಮಿತ್ರ, ಅರ್ಕ, ಸವಿತಾ(ಸವಿತೃ), ಭಾನು, ಆದಿತ್ಯ, ಹಿರಣ್ಯಗರ್ಭ, ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಗ್ರಹಗಳ ಅಧಿಪತಿ ಸೂರ್ಯ.

ಈಜಿಪ್ತ್ ನಾಗರೀಕತೆಯಲ್ಲಿ ರಾ ಹೆಸರಿನಲ್ಲಿ ಅತಿ ಮುಖ್ಯ ದೇವತೆ ಸೂರ್ಯ.
ದಕ್ಷಿಣ ಅಮೇರಿಕಾ ನಾಗರಿಕತೆಗಳಾದ ಮಾಯಾ ಮತ್ತು ಅಜ್ಟೆಕ್ ಜನಾಂಗಗಳು ಸೂರ್ಯಾರಾಧನೆ ಮಾಡುತ್ತಿದ್ದವು. ಸೂರ್ಯನಿಗೆ ನರಬಲಿ ಕೊಟ್ಟು ತೃಪ್ತಿಪಡಿಸುತ್ತಿದ್ದರು.
ಗ್ರೀಕ್, ರೋಮನ್ನರಿಗೆ ಹೀಲಿಯೋಸ್ ಅಥವಾ ಅಪೋಲೋ ಆಗಿ ಸೂರ್ಯ ಕಾಣಿಸಿಕೊಂಡ.
ಪರ್ಷ್ಯನ್ನರು ಕೂಡ ಸೂರ್ಯನನ್ನು ಮಿತ್ರ ಎಂದು ಕರೆದರು.

ಭಾರತೀಯ ಪುರಾಣಗಳ ಪ್ರಕಾರ ಸೂರ್ಯ ಅದಿತಿಯ ಮಗ. ಅವನ ಪತ್ನಿಯರು ಸಂಧ್ಯಾ(ಸಂಜನಾ, ಸಂಜ್ಞ) ಮತ್ತು ಛಾಯಾ. ಮನು, ಶನಿ, ಯಮ ಮತ್ತು ಯಮಿ ಅವನ ಮಕ್ಕಳು. ಯಮಿಯು ತನ್ನ ಸಹೋದರ ಯಮನನ್ನೇ ಮೋಹಿಸಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಕರಗಿ ನೀರಾಗಿ ಯಮುನಾ ನದಿಯಾಗಿ ಭೂಲೋಕದಲ್ಲಿ ಜನಿಸುತ್ತಾಳೆ.
ತ್ರೇತಾಯುಗದ ಸುಗ್ರೀವ, ದ್ವಾಪರಯುಗದ ಕರ್ಣ ಕೂಡ ಸೂರ್ಯನ ಮಕ್ಕಳು.

ಒಡಿಶಾ ರಾಜ್ಯದ ಕೋನಾರ್ಕ ಸೂರ್ಯ ದೇವಾಲಯದ ಅತಿ ಪ್ರಸಿದ್ಧ ತಾಣ. ಗಂಗದೊರೆಯಾದ ನರಸಿಂಹದೇವ ಇದನ್ನು ಹದಿಮೂರನೆ ಶತಮಾನದಲ್ಲಿ ಕಟ್ಟಿಸಿದನು. ಇದು ಈಗ ಶಿಥಿಲಾವಸ್ಥೆಯಲ್ಲಿದೆ. ದೇವಾಲಯದ ಒಳಗೆ ಪ್ರವೇಶ ಮುಚ್ಚಿದ್ದು, ಹೊರಗಿನಿಂದ ಮಾತ್ರ ನೋಡಲು ಸಾಧ್ಯ. ಹೊರಗೋಡೆಯ ಮೇಲೆ ಉತ್ಕೃಷ್ಟವಾದ ಕೆತ್ತನೆ ಇವೆ. ಇದನ್ನು ರಥದ ಮಾದರಿಯಲ್ಲಿ ಕಟ್ಟಲಾಗಿದೆ. ಇಪ್ಪತ್ತುನಾಲ್ಕು ಗಾಲಿಗಳಿವೆ (ಇಪ್ಪತ್ತುನಾಲ್ಕು ಗಂಟೆಗಳನ್ನು ಸೂಚಿಸಲು). ರಥದ ಕೀಲಿನ ನೆರಳು ದಿನದ ಸಮಯವನ್ನು ಸೂಚಿಸುತ್ತದೆ. ಏಳು ಕುದುರೆಗಳಿದ್ದವಂತೆ (ಏಳು ವಾರ, ಏಳು ಕಿರಣ) ಮೊದಲು. ಈಗ ಅವು ಸಂಪೂರ್ಣ ನಾಶವಾಗಿವೆ, ಒಂದನ್ನು ಬಿಟ್ಟು.


 ಕೋನಾರ್ಕದ ಸೂರ್ಯ ದೇವಾಲಯದ ಸೂರ್ಯ ರಥದ ಚಕ್ರ
  
ಕೋನಾರ್ಕದ ಸೂರ್ಯ

ಸೂರ್ಯೋದಯ, ಸೂರ್ಯಾಸ್ತ ಯಾವಾಗಲೂ ಸುಂದರ ದೃಶ್ಯಗಳೇ. ಅವುಗಳಲ್ಲಿ ಕೆಲವು ಇಲ್ಲಿ...

ಸೂರ್ಯ ಸಮುದ್ರ, ಗುಡ್ಡ ಬೆಟ್ಟದಿಂದ ಮಾತ್ರ ಮೇಲೇಳುವುದಿಲ್ಲ, ಕಾರ್ಖಾನೆ ಹೊಗೆ ಕೊಳವೆಯಿಂದ ಕೂಡಾ ಮೇಲೇಳುತ್ತಾನೆ ನೋಡಿ

12 comments:

sunaath said...

ದೀಪಸ್ಮಿತಾ,
ಸೂರ್ಯನ ಬಗೆಗೆ ಅನೇಕ ಮಾಹಿತಿಗಳನ್ನು ನೀಡಿರುವಿರಿ ಹಾಗು ಸುಂದರ ಚಿತ್ರಗಳನ್ನು ನೀಡಿರುವಿರಿ. ‘ಸಂಜನಾ’ ಇದು ಸೂರ್ಯನ ಪತ್ನಿಯ ಹೆಸರು ಎನ್ನುವದು ಗೊತ್ತಿರಲಿಲ್ಲ. ಹೊಸದಾಗಿ ತಿಳಿಯಿತು. ಧನ್ಯವಾದಗಳು.

ಸುಬ್ರಮಣ್ಯ said...

ಒಳ್ಳೇ ಚಿತ್ರಗಳು

Pradeep Rao said...

ಮನಮೋಹಕ ಚಿತ್ರಗಳು! ಸೂರ್ಯನ ಸಂಸಾರದ ಬಗ್ಗೆ ನೀಡಿದ ಮಾಹಿತಿ ತುಂಬಾ ಕುತೂಹಲಕರವಾಗಿದೆ!

www.kumararaitha.com said...

ಚಿತ್ರ-ಮಾಹಿತಿ ಸೊಗಾಗಿದೆ. ಭಾರತೀಯ ಶಿಲ್ಪ ಕಲಾ ಪರಂಪರೆಯ ಕೊಂಡಿಗಳು ಕಳಚಿ ಹೋಗುತ್ತಲೇ ಇವೆ. ದುರದೃಷ್ಟಕರ.

Subrahmanya said...

ಚಿತ್ರಗಳು ಮತ್ತು ಅದನ್ನು ಹೊಂದಿಸಿರು ಸಂದರ್ಭ ತುಂಬಾ ಚೆನ್ನಾಗಿದೆ. ’ಸಂಜನಾ’ ಅಲ್ಲ ಅನ್ಸುತ್ತೆ "ಸಂಜ್ಞಾ ದೇವಿ" ಇರಬಹುದೇ ? ಛಾಯಾ-ಸಂಜ್ಞಾ ಅಂತ ಕೇಳಿದ ನೆನಪು !.

ಮನಸು said...

ಮನಮೋಹಕ ಚಿತ್ರಗಳೊಂದಿಗೆ ನೇಸರನ ಬಗ್ಗೆ ತಿಳಿಸಿದ್ದೀರಿ ಧನ್ಯವಾದಗಳು..

prabhamani nagaraja said...

ಮನಸೂರೆಗೊಳ್ಳುವ ಚಿತ್ರಗೊ೦ದಿಗೆ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.

Sandeep K B said...

Nice photos...

ಮನಮುಕ್ತಾ said...

ಚೆ೦ದದ ಚಿತ್ರಗಳೊ೦ದಿಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ..ಚೆನ್ನಾಗಿದೆ.

ಶಿವಪ್ರಕಾಶ್ said...

nice photos sir

shivu.k said...

ಕುಲದೀಪ್ ಸರ್,
ತುಂಬಾ ಚೆನ್ನಾದ ಫೋಟೊಗಳೊಂದಿಗೆ ಸೂರ್ಯನ ಬಗ್ಗೆಯೂ ಮಾಹಿತಿಯನ್ನು ನೀಡುತ್ತಿದ್ದೀರಿ. ಸೂರ್ಯನ ಪತ್ನಿಯ ಹೆಸರು ನನಗೆ ಗೊತ್ತೇ ಇರಲಿಲ್ಲ.

Chidambar said...

ಉತ್ತಮ ಮಾಹಿತಿ.