ನಾನು ಈ ಬ್ಲಾಗ್ ಪ್ರಾರಂಭಿಸಿ ಒಂದು ವರ್ಷವಾಯಿತು (ಜೂನ್ 10). ಮಧ್ಯದಲ್ಲಿ ಕೆಲಸದ ಒತ್ತಡ, ಸಮಯದ ಅಭಾವದಿಂದ ಸ್ವಲ್ಪಕಾಲ ಬರೆಯುವುದು ನಿಲ್ಲಿಸಿದ್ದರೂ, ಈಗ ಮತ್ತೆ ಚಿಗುರಿದೆ. ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಓದಿ, ನೋಡಿ, ಪ್ರತಿಕ್ರಿಯೆ ನೀಡಿದ, ನೀಡುತ್ತಿರುವ, ಪ್ರೋತ್ಸಾಹಿಸುತ್ತಿರುವ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ ನಾನು ತುಂಬಾ ಕೃತಜ್ನನಾಗಿದ್ದೇನೆ.
ನನಗೆ photography ಪ್ರಿಯವಾಗಿರುವುದರಿಂದ ಈ ಬ್ಲಾಗಿನಲ್ಲಿ ಬರವಣಿಗೆಗಿಂತ ಫೋಟೋಗಳೇ ಜಾಸ್ತಿ. ಅವಕ್ಕೆ ಭಾವಗೀತೆ, ಚಿತ್ರಗೀತೆ ಶೀರ್ಷಿಕೆ ಕೊಡುವುದು ನನಗೆ ಇಷ್ಟ.
ನಾನು ಇದನ್ನು ಪ್ರಾರಂಬಿಸಿದಾಗ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯಬೇಕೆಂದಿದ್ದೆ. ಇದುವರೆಗೂ ಇಂಗ್ಲೀಷ್ ಲೇಖನ ಬರೆದಿಲ್ಲ. ಇಂಗ್ಲೀಷ್ ದ್ವೇಷಿಯೇನಲ್ಲ, ಆದರೆ ಕನ್ನಡ ಹೆಚ್ಚು ಪ್ರಿಯ, ಅಷ್ಟೆ. ಮುಂದೆ ಆಂಗ್ಲ ಬರವಣಿಗೆ ಕೂಡ ಮಾಡುತ್ತೇನೆ, ಲೇಖನಕ್ಕೆ ಆ ಭಾಷೆಯೇ ಸೂಕ್ತ ಎನಿಸಿದರೆ.
ಕಂಪ್ಯೂಟರ್ ಮೊದಲು ಬಂದಾಗ, ಅದು ನಮ್ಮ ಭಾಷೆಗಳನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತದೆ, ಇನ್ನು ಮೇಲೆ ಬರೀ ಇಂಗ್ಲೀಷ್‍ದೇ ಸಾಮ್ರಾಜ್ಯ ಎಂಬ ಭಯ ಇತ್ತು ಕನ್ನಡಿಗರಲ್ಲಿ (ಮತ್ತು ಇತರ ಭಾಷಿಕರಲ್ಲಿ). ಆದರೆ ನೋಡಿ, ಅಂತರಜಾಲದಿಂದಾಗಿ ಈ ಎಲ್ಲ ಭಾಷೆಗಳು ಇನ್ನಷ್ಟು ಸಮೃದ್ಧಿಯಾಗಿವೆ. ಜಗತ್ತಿನ ಯಾವ ಮೂಲೆಯಿಂದ ಕೂಡ ಒಬ್ಬ ಕನ್ನಡಿಗ ಕನ್ನಡ ಪತ್ರಿಕೆ ಓದಬಹುದು, ಕನ್ನಡ ಪತ್ರ ಬರೆದು ಇಡೀ ಜಗತ್ತಿನ ಮುಂದೆ ಇಡಬಹುದು. ಬ್ಲಾಗ್ ಪ್ರಪಂಚದಲ್ಲೇ ಎಷ್ಟು ಸೃಜನಶೀಲತೆ ಕಾಣುತ್ತಿದೆ. ಕನ್ನಡದ್ದೇ ನೂರಾರು ಬ್ಲಾಗ್ ಗಳನ್ನು ನೋಡಿದರೆ ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯಾಗುತ್ತದೆ. ಹೆಚ್ಚಿನ ಬ್ಲಾಗ್ ಗಳು ತುಂಬ ಪ್ರಬುದ್ಧ. ಹಿಂದೆ ಬರೀ ಪತ್ರಿಕೆ, ವಾರಪತ್ರಿಕೆ ಇದ್ದ ಕಾಲದಲ್ಲಿ ಈ ತರಹದ ಸೃಜನಶೀಲತೆ ಬೆಳೆಯಲು ಸಾಧ್ಯವಿತ್ತೆ? ಲೇಖನ, ಕತೆ, ಕವನ, ಫೋಟೊ ಮುಂತಾದವು ವಿಷಾದ ಪತ್ರದೊಡನೆ ಹಿಂದಿರುಗಿ ಬರುವುದೇ ಸಾಮಾನ್ಯವಾಗಿತ್ತು. ಎಷ್ಟೋ ಪ್ರತಿಭಾವಂತ ಬರಹಗಾರರು ಪ್ರೋತ್ಸಾಹ ಇಲ್ಲದೆ ಅವರ ಪ್ರತಿಭೆ, ಅನಿಸಿಕೆ ಅವರಲ್ಲೇ ಮುರುಟಿ ಹೋಗಿತ್ತು.
ಆದರೆ ಈಗ ಅಂತರಜಾಲ ಬಂದು, ಬ್ಲಾಗ್ ಎಂಬ ಹೊಸ ವೇದಿಕೆ ಬಂದು ಅನೇಕ ಪ್ರತಿಭಾವಂತರಿಗೆ ತಮ್ಮ ಅನಿಸಿಕೆ, ಬರಹ, ಚಿತ್ರ, ಫೋಟೊ, ಕವನ, ಒಟ್ಟಿನಲ್ಲಿ ತಮ್ಮ ಆಸಕ್ತ ಕ್ಷೇತ್ರ ಮತ್ತು ಅದರಲ್ಲಿ ತಮ್ಮ ಪ್ರತಿಭೆ, ಸಾಧನೆಯನ್ನು ಇಡೀ ಜಗತ್ತಿನ ಮುಂದೆ ಇಟ್ಟು, ಅದರ ಬಗ್ಗೆ ಚರ್ಚೆ ನಡೆಯಲು ಒಳ್ಳೆಯ ವೇದಿಕೆಯಾಗಿದೆ. ನನ್ನಂತಹ ಅರೆಬೆಂದ ಸಾಮಾನ್ಯ ಲೇಖಕನಿಗೂ ಇಲ್ಲಿ ಜಾಗ ಸಿಕ್ಕಿದೆ, ಓದುಗರು ಇದ್ದಾರೆ.
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...
ಧನ್ಯವಾದ
Wednesday, 10 June 2009
Wednesday, 3 June 2009
ಕನ್ನಡ ಚಿತ್ರಗಳಲ್ಲಿಯ ಕನ್ನಡೇತರ ಗೀತೆಗಳು
ನಮ್ಮ ಕನ್ನಡ ಚಿತ್ರಗಳಲ್ಲಿ ಎಷ್ಟೊಂದು ಮಧುರ ಗೀತೆಗಳು ಬಂದಿವೆ, ಮತ್ತು ಬರುತ್ತಿವೆ. ಸ್ವಲ್ಪಕಾಲ ಮಾಧುರ್ಯ ಕಡಿಮೆಯಾಗಿದ್ದು ನಿಜ. ಮೊದಮೊದಲು ನಮ್ಮ ಕನ್ನಡಿಗರೇ ಕನ್ನಡ ಚಿತ್ರ, ಚಿತ್ರಗೀತೆಗಳೆಂದರೆ ಮೂಗುಮುರಿಯುತ್ತಿದ್ದ ಕಾಲವಿತ್ತು. ಈಗ ಅನೇಕ FM ಚಾನೆಲ್‍ಗಳು ಬಂದು ಮತ್ತೆ ಕನ್ನಡ ಗೀತೆಗಳನ್ನು ಜನಪ್ರಿಯಗೊಳಿಸುತ್ತಿವೆ.
ಇರಲಿ, ನನ್ನ ವಿಷಯ ಅದಲ್ಲ. ನನಗೆ ನಮ್ಮ ಕನ್ನಡ ಚಿತ್ರಗೀತೆಗಳಲ್ಲಿ ಬಳಸಿದ್ದ ಅನ್ಯ ಭಾಷೆ ಹಾಡುಗಳ ಬಗ್ಗೆ ಕುತೂಹಲ. ಅವುಗಳ ಒಂದು ಪಟ್ಟಿ, ನನಗೆ ತಿಳಿದ ಕೆಲ ಹಾಡುಗಳು...
ಸಂಸ್ಕೃತ ಶ್ಲೋಕಗಳು ಸುಮಾರು ಸಿನೆಮಾಗಳಲ್ಲಿ ಬಳಕೆಯಾಗಿವೆ. "ಕವಿರತ್ನ ಕಾಳಿದಾಸ" ಯಾರಿಗೆ ನೆನಪಿಲ್ಲ? ವಿಷ್ಣುವರ್ಧನ್ ಅಭಿನಯದ "ಭಾಗ್ಯಜ್ಯೋತಿ" ಚಿತ್ರದಲ್ಲಿ ಡಾ.ಪಿ.ಬಿ ಶ್ರೀನಿವಾಸ್ ಅವರು ಅದ್ಭುತವಾಗಿ ರಚಿಸಿ ಹಾಡಿದ ’ದಿವ್ಯಗಗನ ವನವಾಸಿನಿ, ಭವ್ಯರುಚಿರಧರಹಾಸಿನಿ, ಪಂಕಜ ನೇತ್ರಿ...’ ತುಂಬಾ ಅಪರೂಪದ ಗೀತೆ. ಇದರ ಸ್ತ್ರೀ ಧ್ವನಿ ಯಾರದ್ದು ಅಂತ ನನಗೆ ಗೊತ್ತಿಲ್ಲ. ಈ ಸುಂದರ ಗೀತೆ ಆಕಾಶವಾಣಿಯಲ್ಲಿ ಕೇಳಿ ತುಂಬಾ ದಿನಗಳಾಗಿವೆ.
’ರಾ ರಾ, ಸರಸಕು ರಾ ರಾ...’. ಇದು ಯಾರು ಬೇಕಾದರೂ ಸುಲಭದಲ್ಲಿ ಹೇಳಬಹುದು ಎಲ್ಲಿಯದು ಎಂದು. "ಆಪ್ತಮಿತ್ರ"ದಲ್ಲಿ ಈ ತೆಲುಗು ಗೀತೆ ಇದ್ದರೂ, ರೇಡಿಯೋದಲ್ಲಿ ಹೆಚ್ಚಾಗಿ ಕೇಳಿಬರುವುದು ಅದರ ಕನ್ನಡ ಅವತರಣಿಕೆ ’ಬಾರಾ, ಸರಸಕೆ ಬಾರ..’
ದ್ವಾರಕೀಶ ವಿಷ್ಣುವರ್ಧನ್ ಜೋಡಿಯ ಹಿಂದಿನ ಚಿತ್ರ "ರಾಯರು ಬಂದರು ಮಾವನ ಮನೆಗೆ"ಯಲ್ಲಿ ಸಂತ ತ್ಯಾಗರಾಜರ ತೆಲುಗು ರಚನೆ ಬಳಕೆಯಾಗಿತ್ತು.
ಕನ್ನಡ ಚಿತ್ರವೊಂದರಲ್ಲಿ ಉರ್ದು ಹಾಡು ಇತ್ತು ಎಂದು ಎಷ್ಟು ಜನರಿಗೆ ಗೊತ್ತು? ’ಖಾನಾ ಪೀನಾ ಮಜಾ ಉಡಾನಾ...’ ಎಂಬ ಉರ್ದು ಹಾಡು "ಶ್ರೀಕೃಷ್ಣದೇವರಾಯ" ಸಿನೆಮಾದಲ್ಲಿ ಇದೆ. ಇದು ಬಹಳ ಜನರಿಗೆ ಗೊತ್ತಿಲ್ಲ. ಐತಿಹಾಸಿಕ ಚಿತ್ರದಲ್ಲಿ ಉರ್ದು ಹಾಡು ಎಲ್ಲಿಂದ ಬಂತು ಅಂತ ಅನುಮಾನ ಬೇಡ. ಕೃಷ್ಣದೇವರಾಯನ ಕಾಲದಲ್ಲಿ ಬಹಮನಿ ರಾಜ್ಯ ಕೂಡ ಇತ್ತಲ್ಲ?
ಹಂಸಲೇಖ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರಪ್ರಶಸ್ತಿ ದೊರಕಿಸಿ ಕೊಟ್ಟ "ಗಾನಯೋಗಿ ಪಂಚಾಕ್ಷರಿ ಗವಾಯಿ" ಸಿನೆಮಾದಲ್ಲಿ ತಾನ್ ಸೇನ್ ರಚಿಸಿದ 'ಗಾನ ವಿದ್ಯಾ ಬಡೀ ಕಠಿಣ ಹೈ...' ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯ ಅವರಿಗೆ ಕನ್ನಡದಲ್ಲಿ ಅತ್ಯುತ್ತಮ ಗಾಯಕ ಪ್ರಶಸ್ತಿ ಕೊಟ್ಟ 'ಉಮಂಡು ಘಮಂಡು...' ಎಂಬ ಎರಡು ಹಿಂದಿ ಗೀತೆಗಳಿವೆ.
ಇಂಗ್ಲೀಶ್ ಹಾಡುಗಳ ಬಗ್ಗೆ ಹೇಳುವುದಾದರೆ, ಡಾ.ರಾಜ್‍ಕುಮಾರ ಹಾಡಿದ ’If you come today, its too early, if you come tomorrow, its too late, you pick the time, tick tick tick...' ., "Operation Diamond Racket" ಚಿತ್ರದ್ದು. ಇದು ಹೆಚ್ಚಾಗಿ ಎಲ್ಲರಿಗೂ ಗೊತ್ತಿರುವ ಹಾಡು. ನನಗೆ ಗೊತ್ತಿರುವ ಹಾಗೆ ಇನ್ನೂ ಒಂದೆರಡು ಚಿತ್ರಗಳಲ್ಲಿ ಇಂಗ್ಲೀಶ್ ಹಾಡುಗಳಿವೆ.
"ಮದರ್" ಎಂಬ ಚಿತ್ರದಲ್ಲಿ ’Somewhere, someone is waiting for me...' ಎಂಬ ಸಂಪೂರ್ಣ ಇಂಗ್ಲೀಶ್ ಗೀತೆ ಇದೆ.
"ಬೆಸುಗೆ" ಸಿನೆಮಾ ನಮ್ಮ ಕನ್ನಡಿಗರಲ್ಲಿ ಯಾರಿಗೆ ಗೊತ್ತಿಲ್ಲ? ’ಬೆಸುಗೆ ಬೆಸುಗೆ’ ಈ ಹಾಡು ತುಂಬ ಜನಪ್ರಿಯ. ಆದರೆ ಇದೇ ಸಿನೆಮಾದಲ್ಲಿ ಸಂಪೂರ್ಣ ಇಂಗ್ಲೀಶಿನಲ್ಲಿ ಒಂದು ಹಾಡಿದೆ. ’Love is a merry melody, life is a haunting rhapsody...' ಇದು ಕೂಡ ಹೆಚ್ಚಿನವರಿಗೆ ಗೊತ್ತಿಲ್ಲ.
ನನಗೆ ಗೊತ್ತಿರುವ ಮಟ್ಟಿಗೆ ಈ ಮೂರು ಸಂಪೂರ್ಣ ಇಂಗ್ಲೀಶ್ ಹಾಡುಗಳು. "ಬಿಳಿ ಹೆಂಡ್ತಿ" ಸಿನೆಮಾದ ’Happiest moments every event, feel the blessings, what an enchantment, ಬಿಳೀ ಹೆಂಡ್ತಿ singing with joy...’. ಇದರಲ್ಲಿ ಬರುವ ’ಬಿಳಿ ಹೆಂಡ್ತಿ’, ’ಅತ್ತೆ, ಮಾವ’ ಮುಂತಾದ ಕನ್ನಡ ಪದಗಳನ್ನು ಬಿಟ್ಟರೆ ಇದು ಕೂಡ ಪೂರ್ತಿ ಇಂಗ್ಲೀಶ್ ಹಾಡು ಎನ್ನಬಹುದು.
ಇನ್ನು ಕಲಬೆರಕೆ ಹಾಡುಗಳಿಗೆ ಬರವೇನಿಲ್ಲ. ಕನ್ನಡ ಇಂಗ್ಲೀಶ್, ಕನ್ನಡ ತಮಿಳು (’H2O'), ಕನ್ನಡ ಮಲಯಾಳಮ್ (’My Autograph'), ಇವು ನನಗೀಗ ನೆನಪಿಗೆ ಬರುತ್ತಿರುವ ಕಲಬೆರಕೆ ಹಾಡುಗಳು.
ಇನ್ನೂ ಈ ಥರದ ವಿಶಿಷ್ಟ ಹಾಡುಗಳು ಕನ್ನಡ ಹಾಡುಗಳ ಕಣಜದಲ್ಲಿರಬಹುದು. ಅವನ್ನು ಜನರಿಗೆ ತಲುಪಿಸುವುದು ಆಕಾಶವಾಣಿಯ, ವಿವಿಧಭಾರತಿಯ ಮತ್ತು ಇತರ ಎಫ್.ಎಂ ವಾಹಿನಿಗಳ ಕರ್ತವ್ಯ. ಅಷ್ಟೆ ಅಲ್ಲ, TV ವಾಹಿನಿಗಳು ಕೂಡ ಬರೀ ಹೊಸ ಹಾಡುಗಳನ್ನು ಮಾತ್ರ ಹಾಕದೆ ಇಂಥಾ ವಿಶಿಷ್ಟ, ವಿಚಿತ್ರ ಗೀತೆಗಳನ್ನು ಜನರಿಗೆ ತಲುಪಿಸಬೇಕು.

Subscribe to:
Posts (Atom)