Showing posts with label ಬ್ಲಾಗ್. Show all posts
Showing posts with label ಬ್ಲಾಗ್. Show all posts

Thursday, 28 April 2011

ಏನಿದರ ಹೆಸರು? ನೀವೇ ಇಟ್ಟುಕೊಳ್ಳಿ...

ಏಪ್ರಿಲ್ 24, ಪ್ರಕಾಶಣ್ಣನ 'ಇದೇ ಇದರ ಹೆಸರು' ಬಿಡುಗಡೆ ಸಮಾರಂಭದ ಕೆಲ ದೃಶ್ಯಗಳು

ಉಪ್ಪಿಟ್ಟು ಶಿರಾ, ಇನ್ನೂ ಸಲ್ಪ ಹಾಕ್ಸ್ಕಳಿ

ಕಾಫಿ ಬಗ್ಗೆ ನನಗೊಂದು ಹನಿಗವನ ನೆನಪಾಗ್ತಿದೆ ಮಾರಾಯ್ರೆ

ಪಂಚಮ್ ಹಳಿಬಂಡಿ, ಉಪಾಸನಾ ಮೋಹನ್

ನಿಮ್ಮೊಳಗೊಬ್ಬ, ಅಲ್ಲಲ್ಲ, ನಮ್ಮೊಳಗೊಬ್ಬ ಬಾಲು ಛಾಯಾಗ್ರಹಣ

ದಿಗ್ವಾಸ್ ಹೆಗಡೆ ತಲ್ಲೀನತೆ ನೋಡಿದರೆ ಸಾಕು ಅವರ 'ಚಿತ್ರಪಟ'ದ ಗುಣಮಟ್ಟ ತಿಳಿಯಲು

ಸಣ್ಣವನಾಗಿದ್ದಾಗ ತುಂಬಾ ತುಂಟ.....ಪ್ರಕಾಶಣ್ಣ ಮತ್ತವರ ಅಕ್ಕ

ಹನಿಗವನ punಡಿತ ಡುಂಡಿರಾಜ್ ಮತ್ತು 'ಕಳ್‍ಮಂಜ' ಕೋಮಲ್

ನೋಡಿ ಸ್ವಾಮಿ, ಇದೇ ಇದರ ಹೆಸರು

'ಶುಭಂ'ಗಿಂತ ಮುಂಚೆ ಗ್ರೂಪ್ ಫೋಟೋ

Thursday, 10 June 2010

"ಇನಿ ದನಿ"ಗೆ ಎರಡು ವರ್ಷ

"ಇನಿ ದನಿ" ಶುರುವಾಗಿ ಈಗ ಎರಡು ವರ್ಷವಾಯಿತು (ಜೂನ್ 10, 2008). ನನ್ನ ಬ್ಲಾಗಿಗೆ ಭೇಟಿ ನೀಡಿ, ಓದಿ, ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ನನ್ನ ಎಲ್ಲಾ ಬ್ಲಾಗ್ ಮಿತ್ರರಿಗೆ ನನ್ನ ವಂದನೆಗಳು.


ಎರಡನೆಯ ವರ್ಷದ ಒಂದು ಸಣ್ಣ ಅವಲೋಕನ:
ಮೂರನೆಯ ಆಯಾಮದ (3D) ಚಿತ್ರಗಳ ಬಗ್ಗೆ ಒಂದು ವೈಜ್ಞಾನಿಕ ಲೇಖನ
ಸೂರ್ಯಗ್ರಹಣದ ಚಿತ್ರಗಳು
ಆಲೆಮನೆಯ ಬಗ್ಗೆ ಚಿತ್ರಲೇಖನ
ತುಳುನಾಡಿನ ವಿಶಿಷ್ಟ ನಾಗಮಂಡಲ ಆಚರಣೆಯ ಬಗ್ಗೆ ಚಿತ್ರಲೇಖನ
... ಮತ್ತು ಯಥಾಪ್ರಕಾರ ನಾನು ತೆಗೆದ ಒಂದಿಷ್ಟು ಫೋಟೋಗಳು

ಈ ವರ್ಷ ಇನ್ನೂ ಒಳ್ಳೊಳ್ಳೆ ಬ್ಲಾಗ್ ಸ್ನೇಹಿತರು ಸಿಕ್ಕಿದರು. ಹೀಗೆ ಬೆಳೆಯಲಿ ಪಟ್ಟಿ. ಅಗಸ್ಟ್ 22ರ ಬ್ಲಾಗ್ ಕೂಟದಲ್ಲಿ ಮುಖತಃ ಭೇಟಿಗೆ ಕಾಯುತ್ತಿದ್ದೇನೆ

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಇನ್ನೊಮ್ಮೆ ಧನ್ಯವಾದಗಳು
ದೀಪಸ್ಮಿತಾ

Wednesday, 10 June 2009

’ಇನಿದನಿ’ಗೆ ಒಂದು ವರ್ಷ

ನಾನು ಈ ಬ್ಲಾಗ್ ಪ್ರಾರಂಭಿಸಿ ಒಂದು ವರ್ಷವಾಯಿತು (ಜೂನ್ 10). ಮಧ್ಯದಲ್ಲಿ ಕೆಲಸದ ಒತ್ತಡ, ಸಮಯದ ಅಭಾವದಿಂದ ಸ್ವಲ್ಪಕಾಲ ಬರೆಯುವುದು ನಿಲ್ಲಿಸಿದ್ದರೂ, ಈಗ ಮತ್ತೆ ಚಿಗುರಿದೆ. ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಓದಿ, ನೋಡಿ, ಪ್ರತಿಕ್ರಿಯೆ ನೀಡಿದ, ನೀಡುತ್ತಿರುವ, ಪ್ರೋತ್ಸಾಹಿಸುತ್ತಿರುವ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ ನಾನು ತುಂಬಾ ಕೃತಜ್ನನಾಗಿದ್ದೇನೆ.

ನನಗೆ photography ಪ್ರಿಯವಾಗಿರುವುದರಿಂದ ಈ ಬ್ಲಾಗಿನಲ್ಲಿ ಬರವಣಿಗೆಗಿಂತ ಫೋಟೋಗಳೇ ಜಾಸ್ತಿ. ಅವಕ್ಕೆ ಭಾವಗೀತೆ, ಚಿತ್ರಗೀತೆ ಶೀರ್ಷಿಕೆ ಕೊಡುವುದು ನನಗೆ ಇಷ್ಟ.

ನಾನು ಇದನ್ನು ಪ್ರಾರಂಬಿಸಿದಾಗ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯಬೇಕೆಂದಿದ್ದೆ. ಇದುವರೆಗೂ ಇಂಗ್ಲೀಷ್ ಲೇಖನ ಬರೆದಿಲ್ಲ. ಇಂಗ್ಲೀಷ್ ದ್ವೇಷಿಯೇನಲ್ಲ, ಆದರೆ ಕನ್ನಡ ಹೆಚ್ಚು ಪ್ರಿಯ, ಅಷ್ಟೆ. ಮುಂದೆ ಆಂಗ್ಲ ಬರವಣಿಗೆ ಕೂಡ ಮಾಡುತ್ತೇನೆ, ಲೇಖನಕ್ಕೆ ಆ ಭಾಷೆಯೇ ಸೂಕ್ತ ಎನಿಸಿದರೆ.

ಕಂಪ್ಯೂಟರ್ ಮೊದಲು ಬಂದಾಗ, ಅದು ನಮ್ಮ ಭಾಷೆಗಳನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತದೆ, ಇನ್ನು ಮೇಲೆ ಬರೀ ಇಂಗ್ಲೀಷ್‍ದೇ ಸಾಮ್ರಾಜ್ಯ ಎಂಬ ಭಯ ಇತ್ತು ಕನ್ನಡಿಗರಲ್ಲಿ (ಮತ್ತು ಇತರ ಭಾಷಿಕರಲ್ಲಿ). ಆದರೆ ನೋಡಿ, ಅಂತರಜಾಲದಿಂದಾಗಿ ಈ ಎಲ್ಲ ಭಾಷೆಗಳು ಇನ್ನಷ್ಟು ಸಮೃದ್ಧಿಯಾಗಿವೆ. ಜಗತ್ತಿನ ಯಾವ ಮೂಲೆಯಿಂದ ಕೂಡ ಒಬ್ಬ ಕನ್ನಡಿಗ ಕನ್ನಡ ಪತ್ರಿಕೆ ಓದಬಹುದು, ಕನ್ನಡ ಪತ್ರ ಬರೆದು ಇಡೀ ಜಗತ್ತಿನ ಮುಂದೆ ಇಡಬಹುದು. ಬ್ಲಾಗ್ ಪ್ರಪಂಚದಲ್ಲೇ ಎಷ್ಟು ಸೃಜನಶೀಲತೆ ಕಾಣುತ್ತಿದೆ. ಕನ್ನಡದ್ದೇ ನೂರಾರು ಬ್ಲಾಗ್ ಗಳನ್ನು ನೋಡಿದರೆ ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯಾಗುತ್ತದೆ. ಹೆಚ್ಚಿನ ಬ್ಲಾಗ್ ಗಳು ತುಂಬ ಪ್ರಬುದ್ಧ. ಹಿಂದೆ ಬರೀ ಪತ್ರಿಕೆ, ವಾರಪತ್ರಿಕೆ ಇದ್ದ ಕಾಲದಲ್ಲಿ ಈ ತರಹದ ಸೃಜನಶೀಲತೆ ಬೆಳೆಯಲು ಸಾಧ್ಯವಿತ್ತೆ? ಲೇಖನ, ಕತೆ, ಕವನ, ಫೋಟೊ ಮುಂತಾದವು ವಿಷಾದ ಪತ್ರದೊಡನೆ ಹಿಂದಿರುಗಿ ಬರುವುದೇ ಸಾಮಾನ್ಯವಾಗಿತ್ತು. ಎಷ್ಟೋ ಪ್ರತಿಭಾವಂತ ಬರಹಗಾರರು ಪ್ರೋತ್ಸಾಹ ಇಲ್ಲದೆ ಅವರ ಪ್ರತಿಭೆ, ಅನಿಸಿಕೆ ಅವರಲ್ಲೇ ಮುರುಟಿ ಹೋಗಿತ್ತು.

ಆದರೆ ಈಗ ಅಂತರಜಾಲ ಬಂದು, ಬ್ಲಾಗ್ ಎಂಬ ಹೊಸ ವೇದಿಕೆ ಬಂದು ಅನೇಕ ಪ್ರತಿಭಾವಂತರಿಗೆ ತಮ್ಮ ಅನಿಸಿಕೆ, ಬರಹ, ಚಿತ್ರ, ಫೋಟೊ, ಕವನ, ಒಟ್ಟಿನಲ್ಲಿ ತಮ್ಮ ಆಸಕ್ತ ಕ್ಷೇತ್ರ ಮತ್ತು ಅದರಲ್ಲಿ ತಮ್ಮ ಪ್ರತಿಭೆ, ಸಾಧನೆಯನ್ನು ಇಡೀ ಜಗತ್ತಿನ ಮುಂದೆ ಇಟ್ಟು, ಅದರ ಬಗ್ಗೆ ಚರ್ಚೆ ನಡೆಯಲು ಒಳ್ಳೆಯ ವೇದಿಕೆಯಾಗಿದೆ. ನನ್ನಂತಹ ಅರೆಬೆಂದ ಸಾಮಾನ್ಯ ಲೇಖಕನಿಗೂ ಇಲ್ಲಿ ಜಾಗ ಸಿಕ್ಕಿದೆ, ಓದುಗರು ಇದ್ದಾರೆ.

ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...
ಧನ್ಯವಾದ