ನಾನು ಈ ಬ್ಲಾಗ್ ಪ್ರಾರಂಭಿಸಿ ಒಂದು ವರ್ಷವಾಯಿತು (ಜೂನ್ 10). ಮಧ್ಯದಲ್ಲಿ ಕೆಲಸದ ಒತ್ತಡ, ಸಮಯದ ಅಭಾವದಿಂದ ಸ್ವಲ್ಪಕಾಲ ಬರೆಯುವುದು ನಿಲ್ಲಿಸಿದ್ದರೂ, ಈಗ ಮತ್ತೆ ಚಿಗುರಿದೆ. ನನ್ನ ಬ್ಲಾಗಿಗೆ ಭೇಟಿ ಕೊಟ್ಟು, ಓದಿ, ನೋಡಿ, ಪ್ರತಿಕ್ರಿಯೆ ನೀಡಿದ, ನೀಡುತ್ತಿರುವ, ಪ್ರೋತ್ಸಾಹಿಸುತ್ತಿರುವ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ ನಾನು ತುಂಬಾ ಕೃತಜ್ನನಾಗಿದ್ದೇನೆ.
ನನಗೆ photography ಪ್ರಿಯವಾಗಿರುವುದರಿಂದ ಈ ಬ್ಲಾಗಿನಲ್ಲಿ ಬರವಣಿಗೆಗಿಂತ ಫೋಟೋಗಳೇ ಜಾಸ್ತಿ. ಅವಕ್ಕೆ ಭಾವಗೀತೆ, ಚಿತ್ರಗೀತೆ ಶೀರ್ಷಿಕೆ ಕೊಡುವುದು ನನಗೆ ಇಷ್ಟ.
ನಾನು ಇದನ್ನು ಪ್ರಾರಂಬಿಸಿದಾಗ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಬರೆಯಬೇಕೆಂದಿದ್ದೆ. ಇದುವರೆಗೂ ಇಂಗ್ಲೀಷ್ ಲೇಖನ ಬರೆದಿಲ್ಲ. ಇಂಗ್ಲೀಷ್ ದ್ವೇಷಿಯೇನಲ್ಲ, ಆದರೆ ಕನ್ನಡ ಹೆಚ್ಚು ಪ್ರಿಯ, ಅಷ್ಟೆ. ಮುಂದೆ ಆಂಗ್ಲ ಬರವಣಿಗೆ ಕೂಡ ಮಾಡುತ್ತೇನೆ, ಲೇಖನಕ್ಕೆ ಆ ಭಾಷೆಯೇ ಸೂಕ್ತ ಎನಿಸಿದರೆ.
ಕಂಪ್ಯೂಟರ್ ಮೊದಲು ಬಂದಾಗ, ಅದು ನಮ್ಮ ಭಾಷೆಗಳನ್ನೆಲ್ಲ ನುಂಗಿ ನೀರು ಕುಡಿದುಬಿಡುತ್ತದೆ, ಇನ್ನು ಮೇಲೆ ಬರೀ ಇಂಗ್ಲೀಷ್‍ದೇ ಸಾಮ್ರಾಜ್ಯ ಎಂಬ ಭಯ ಇತ್ತು ಕನ್ನಡಿಗರಲ್ಲಿ (ಮತ್ತು ಇತರ ಭಾಷಿಕರಲ್ಲಿ). ಆದರೆ ನೋಡಿ, ಅಂತರಜಾಲದಿಂದಾಗಿ ಈ ಎಲ್ಲ ಭಾಷೆಗಳು ಇನ್ನಷ್ಟು ಸಮೃದ್ಧಿಯಾಗಿವೆ. ಜಗತ್ತಿನ ಯಾವ ಮೂಲೆಯಿಂದ ಕೂಡ ಒಬ್ಬ ಕನ್ನಡಿಗ ಕನ್ನಡ ಪತ್ರಿಕೆ ಓದಬಹುದು, ಕನ್ನಡ ಪತ್ರ ಬರೆದು ಇಡೀ ಜಗತ್ತಿನ ಮುಂದೆ ಇಡಬಹುದು. ಬ್ಲಾಗ್ ಪ್ರಪಂಚದಲ್ಲೇ ಎಷ್ಟು ಸೃಜನಶೀಲತೆ ಕಾಣುತ್ತಿದೆ. ಕನ್ನಡದ್ದೇ ನೂರಾರು ಬ್ಲಾಗ್ ಗಳನ್ನು ನೋಡಿದರೆ ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯಾಗುತ್ತದೆ. ಹೆಚ್ಚಿನ ಬ್ಲಾಗ್ ಗಳು ತುಂಬ ಪ್ರಬುದ್ಧ. ಹಿಂದೆ ಬರೀ ಪತ್ರಿಕೆ, ವಾರಪತ್ರಿಕೆ ಇದ್ದ ಕಾಲದಲ್ಲಿ ಈ ತರಹದ ಸೃಜನಶೀಲತೆ ಬೆಳೆಯಲು ಸಾಧ್ಯವಿತ್ತೆ? ಲೇಖನ, ಕತೆ, ಕವನ, ಫೋಟೊ ಮುಂತಾದವು ವಿಷಾದ ಪತ್ರದೊಡನೆ ಹಿಂದಿರುಗಿ ಬರುವುದೇ ಸಾಮಾನ್ಯವಾಗಿತ್ತು. ಎಷ್ಟೋ ಪ್ರತಿಭಾವಂತ ಬರಹಗಾರರು ಪ್ರೋತ್ಸಾಹ ಇಲ್ಲದೆ ಅವರ ಪ್ರತಿಭೆ, ಅನಿಸಿಕೆ ಅವರಲ್ಲೇ ಮುರುಟಿ ಹೋಗಿತ್ತು.
ಆದರೆ ಈಗ ಅಂತರಜಾಲ ಬಂದು, ಬ್ಲಾಗ್ ಎಂಬ ಹೊಸ ವೇದಿಕೆ ಬಂದು ಅನೇಕ ಪ್ರತಿಭಾವಂತರಿಗೆ ತಮ್ಮ ಅನಿಸಿಕೆ, ಬರಹ, ಚಿತ್ರ, ಫೋಟೊ, ಕವನ, ಒಟ್ಟಿನಲ್ಲಿ ತಮ್ಮ ಆಸಕ್ತ ಕ್ಷೇತ್ರ ಮತ್ತು ಅದರಲ್ಲಿ ತಮ್ಮ ಪ್ರತಿಭೆ, ಸಾಧನೆಯನ್ನು ಇಡೀ ಜಗತ್ತಿನ ಮುಂದೆ ಇಟ್ಟು, ಅದರ ಬಗ್ಗೆ ಚರ್ಚೆ ನಡೆಯಲು ಒಳ್ಳೆಯ ವೇದಿಕೆಯಾಗಿದೆ. ನನ್ನಂತಹ ಅರೆಬೆಂದ ಸಾಮಾನ್ಯ ಲೇಖಕನಿಗೂ ಇಲ್ಲಿ ಜಾಗ ಸಿಕ್ಕಿದೆ, ಓದುಗರು ಇದ್ದಾರೆ.
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...
ಧನ್ಯವಾದ
Subscribe to:
Post Comments (Atom)
7 comments:
congratulations...
Hearty Congratulations, we are waiting for second year celebration
ವರ್ಷ ಪೂರೈಸಿದಕ್ಕೆ ಅಭಿನಂದನೆಗಳು! ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ...
ಅಭಿನಂದನೆಗಳು ಸರ್..
ಮುಂದುವರಿಯಲಿ ನಿಮ್ಮ ಅಭಿಯಾನ....
ಒಂದು ವರ್ಷದ ಯಶಸ್ವಿ ಬ್ಲಾಗ್ ಯಾತ್ರೆಗೆ ಅಭಿನಂದನೆಗಳು. ನನ್ನ ಬ್ಲಾಗ್ ಗೆ ಬೇಟಿ ನೀಡಿ ಪ್ರತಿಕ್ರಿಯಿಸಿದಕ್ಕು ಧನ್ಯವಾದಗಳು
-ವೀರೇಶ್
ಅಭಿನಂದನೆಗಳು,
ನನ್ನ ಬ್ಲಾಗ್ ಗೆ ಬೇಟಿ ನೀಡಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ರವಿ.
ದೀಪಸ್ಮಿತ....
ಇನ್ನಷ್ಟು ಚಂದದ ಫೋಟೊಗಳು, ಲೇಖನಗಳು ನಿಮ್ಮ ಬ್ಲಾಗಲ್ಲಿ ಬರಲಿ...
ಅಭಿನಂದನೆಗಳು...
Post a Comment